Wednesday, 19 December 2012

Jackie


Shiva Anta Hogutidde Song Lyric -
Shiva Antha Hogutidde..
Shiva Antha Hogutidde Roadinali…
Sikkabatte Saala Ittu Life-inali..
Ardha Tanku Petrol Ittu Bike-inali..

Nee Kande Side-inali..
Kandu Kandu Biddangaaithu Halladali..
Kambli Hula Bittangaaithu Heartinali..
Kachaguli Ittangaaithu Benninali..
Nee Kunthaaga Bike-inali..

Topu Gearu Haakangilla.. Sumne Breaku Hodeyangilla.. – 2
Ayyo Paapa Hudgi Jeeva Hedaruvudu.. Nange Yaake Hinge Ella Anisuvudu..
Ondu Maatu… Kelalilla..
Ondu Maatu Kelalilla.. Hinde Munde Nodalilla..
Nanna Ede Site-anu Kondukondu.. Tada Maadade Paayava Todibitlu..
Hoovinantha Hudga Naanu Tumba Mrudu.. – 2
Henmakle Strongu Guru.. Wrongu Guru.. Wrongu Guru.. Wrongu Guru.. Wrongu Guru..

Shiva Antha Hogutidde Roadinali…
Sikkabatte Saala Ittu Life-inali..
Ardha Tanku Petrol Ittu Bike-inali..
Nee Kande Side-inali..

Unnalilla.. Thinnalilla.. Matamata Madhyaanhave
Unnalilla.. Thinnalilla.. Matamata Madhyaanha
Kunthu Bitlu Hindugade Seat-inali, Naav Hodbeku Nammade Boot-inali..
Ondu KG Akki Rate-u…
Ondu KG Akki Rate-u Movatth Rupaai Aagihoytu..
Easy-yaagi Hege Naanu Preethisali.. Adarallu Modalene Betiyali..
Ration Cardu Beke Beku Preethisalu – 2
Samsaara Bekaa Guru.. Beku Guru.. Beku Guru.. Beku Guru.. Beku Guru..

Shiva Antha Hogutidde Roadinali…
Sikkabatte Saala Ittu Life-inali..
Ardha Tanku Petrol Ittu Bike-inali..
Nee Kande Side-inali..
Kandu Kandu Biddangaaithu Halladali..
Kambli Hula Bittangaaithu Heartinali..
Kachaguli Ittangaaithu Benninali..
Nee Kunthaaga Bike-inali..

HAGE SUMMANE

ODI BANDENU NINNAA NODALU... Song Lyric -

ಓಡಿ ಬಂದೆನು ನಿನ್ನ ನೋಡಲು
ಕಾದು ನಿಂತೆ ನಾನು ಏನೋ ಕೇಳಲು
ನೀ ಮೌನಿಯಾದರೆ ಏನು ಮಾಡಲಿ, ಎಲ್ಲಿ ಹೋಗಲಿ
ಹೂವು ತಂದೆನು ನಿನಗೆ ನೀಡಲು
ನಿನ್ನ ಕಂಗಳಲ್ಲಿ ನನ್ನ ನೋಡಲು
ನೀನೇ ಮಾಯವಾದರೆ ಏನು ಮಾಡಲಿ, ಎಲ್ಲಿ ಹೋಗಲಿ
ನೂರೊಂದು ಬಾರಿ ಹರಿದು ನಾ ಬರೆದ ಓಲೆಯ,
ತುಸುವಾದರೂ ತೆರೆದೋದದೆ ನೀ ಹಾಗೆ ಹೋದೆಯಾ
ಕರೆಯೊಂದ ಮಾಡಿ ಬಿಡಲೇ ಎದೆಯಿಂದ ಈಗಲೇ,
ಪದವಿಲ್ಲದೇ, ಸ್ವರವಿಲ್ಲದೇ, ನಿನ್ನನ್ನು ಕೂಗಲೇ
ಹೂವು ತಂದೆನು..
ಕನಸಿಂದ ಛಾಪಿಸಿರುವೆ, ಈ ಮನದ ಸಂಚಿಕೆ
ಮುಖಪುಟವನು ನೀ ನೋಡದೆ ಮರೆಯಾದೆ ಏತಕೆ
ನೆನಪಿಂದ ರೂಪಿಸಿರುವ ನವಿರಾದ ಸೇತುವೆ
ನಿನಗಾಗಿಯೇ ಅಣಿ ಮಾಡುತ ನಾನಂತೂ ಕಾಯುವೆ
ಓಡಿ ಬಂದೆನು..

KOOl

Noduta Noduta Song Lyric -

ನೋಡುತಾ ನೋಡುತಾ ನಿನ್ನನೇ ನೋಡುತಾ...

ಹಾಡುತಾ ಹಾಡುತಾ ಸುಮ್ಮನೇ ಹಾಡುತಾ...

ಕೇಳುತಾ ಕೇಳುತಾ ಎದೆಬಡಿತವಾ ಕೇಳುತಾ...

ಕಾಡುತಾ ಕಾಡುತಾ ಸವಿಯಾಗಿ ಕಾಡುತಾ...

ಹೀಗೇ ಕಳೆಯಲಿ ಒಂದಿನಾ...

ಹೀಗೇ ಕಳೆಯಲಿ ಜೀವನಾ...

ನೋಡುತಾ ನೋಡುತಾ ನಿನ್ನನೇ ನೋಡುತಾ...

ಹಾಡುತಾ ಹಾಡುತಾ ಸುಮ್ಮನೇ ಹಾಡುತಾ...



ಸಾವಿರಾ ಸ್ವರಗಳ ನುಡಿಸುವೆ ಒಮ್ಮೆಲೇ...

ಸದ್ದನೂ ಮಾಡದೇ ನೀ ಕೇಳು ಒಮ್ಮೆ...

ತುಂಟ ವಯಸ್ಸು ನಿನ್ನಲ್ಲಿ ಏನೋ ಹುಡುಕುವಾಗ

ಆ ಕಡೆ ನೀ ನೋಡದೇ ಸುಮ್ಮನೇ ಇರಬಾರದೇ..

ಕಣ್ಣಿನಲ್ಲಿ ಧೂಳಂತ ನಾನು ನಟಿಸುವಾಗ

ಸೋಕಿಸಿ ನಿನ್ನುಸಿರನೂ ಸಾಯಿಸು ತುಸು ನನ್ನನು

ಕಂಗಳಾ ಸಮರವೋ ಉಸಿರಿನಾ ಶಾಕವೋ...

ಒಲವಿನಾ ರಾಗವೋ...ಅರಿಯದಾ ಪುಳಕವೋ...

ಹೀಗೇ ಕಳೆಯಲಿ ಒಂದಿನಾ...

ಹೀಗೇ ಕಳೆಯಲಿ ಜೀವನಾ...



ಜನಿಸುವಾ ಮುನ್ನವೇ ಹೃದಯವೂ ನಿನ್ನನೇ...

ಹುಡುಕಿದಾ ಕಥೆಯನೂ ನಾ ಹೇಳಲೇನು

ಮಾತು ಸಾಕು ಅಂದಾಗ ಒಂದು ಸಣ್ಣ ಜಗಳಾ...

ಸುಮ್ಮನೇ ಆರಂಭಿಸು ಆದರೇ ಬೇಗ ಮುಗಿಸು

ಹಾಂ... ಕಳ್ಳ ನಿದ್ದೆ ಬಂದಾಗ ನಿನ್ನ ಮಡಿಲಾ ಮೇಲೆ

ಹಾಯಾಗಿ ನಾ ಮಲಗಲೇ... ಹಾಗೇನೆ ಕನಸಾಗಲೇ...

ಸುಮ್ಮನೇ ಕುಂತರೂ... ನಿನ್ನದೇ ತುಂತುರೂ...

ತೀರದೆ ಎಂದಿಗೂ... ಪ್ರೀತಿಯಾ ಮಂಪರೂ...

ಹೀಗೇ ಕಳೆಯಲಿ ಒಂದಿನಾ...

ಹೀಗೇ ಕಳೆಯಲಿ ಜೀವನಾ...

ನೋಡುತಾ ನೋಡುತಾ ನಿನ್ನನೇ ನೋಡುತಾ...

ಹಾಡುತಾ ಹಾಡುತಾ ಸುಮ್ಮನೇ ಹಾಡುತಾ...

ಕೇಳುತಾ ಕೇಳುತಾ ಎದೆಬಡಿತವಾ ಕೇಳುತಾ...

ಕಾಡುತಾ ಕಾಡುತಾ ಸವಿಯಾಗಿ ಕಾಡುತಾ...

ಹೀಗೇ ಕಳೆಯಲಿ ಒಂದಿನಾ...

ಹೀಗೇ ಕಳೆಯಲಿ ಜೀವನಾ...

MUNGARU MALE

MUNGARU MALEYE Song Lyric -

ಮುಂಗಾರು ಮಳೆಯೇ, ಏನುನಿನ್ನ ಹನಿಗಳ ಲೀಲೆ
ಮುಂಗಾರು ಮಳೆ ಬಂದಾಗ ಏನೇನು ಆಗುತ್ತದೆ ಅನ್ನುವುದು ಸಾಲುಸಾಲಿನಲ್ಲಿಯೂ ಗೋಚರ. ಈ ಹಾಡು ಓದಿ ಮುಗಿಸಿದ ನಂತರ ಮಳೆಯಲ್ಲಿ ನೆನೆದಂತೆ ಅನುಭವ... ಇನ್ನು ಚಿತ್ರದಲ್ಲಿ ಈ ಹಾಡು ನೋಡುವುದು ಇನ್ನೊಂದು ಅನುಭವ!
ಗಾಯಕ : ಸೋನು ನಿಗಮ್‌
ಸಾಹಿತ್ಯ : ಯೋಗರಾಜ್‌ ಭಟ್‌
ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೇ, ಧರೆಯ ಕೊರಳ ಪ್ರೇಮದ ಮಾಲೆ
ಸುರಿವ ಒಲುಮೆಯಾ ಜಡಿಮಳೆಗೆ, ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿಯಾಡೆಯುವುದೋ, ತಿಳಿಯದಾಗಿದೆ
ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ
ಭುವಿ ಕೆನ್ನೆ ತುಂಬಾ, ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬಾ, ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆಯಾ ಸವಿ ಸದ್ದು, ಪ್ರೇಮ ನಾದವೋ
ಎದೆ ಮುಗಿಲಿನಲ್ಲಿ, ರಂಗು ಚೆಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನಬಿಲ್ಲು, ಏನೋ ಮೋಡಿಯೋ
ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ
ಯಾವ ಹನಿಗಳಿಂದ, ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಷದಿಂದ, ಯಾರ ಮನವು ಹಸಿಯಾಗುವುದೋ
ಯಾರ ಉಸಿರಲ್ಯಾರ ಹೆಸರೋ, ಯಾರು ಬರೆದರೋ
ಯಾವ ಪ್ರೀತಿ ಹೂವು, ಯಾರ ಹೃದಯದಲ್ಲರಳುವುದೋ
ಯಾರ ಪ್ರೇಮ ಪೂಜೆಗೆ ಮುಡಿಪೋ, ಯಾರು ಬಲ್ಲರೋ
ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ
ಒಲವ ಚಂದಮಾಮ, ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ, ಹೃದಯ ಹೊರಟಿದೇಮೆರವಣಿಗೆ
ಅವಳ ಪ್ರೇಮದೂರಿನ ಕಡೆಗೆ, ಪ್ರೀತಿ ಪಯಣವೋ
ಪ್ರಣಯದೂರಿನಲ್ಲಿ, ಕಳೆದು ಹೊಗೋ ಸುಖವಾ ಇಂದು
ಧನ್ಯನಾದೆ ಪಡೆದುಕೊಂಡು, ಹೊಸ ಜನ್ಮವೋ
ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ.....

ADDURI

Mussanje Veleli Song Lyric -

ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ....!!
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ...!!
ಒಲವಿಲ್ಲ ದ ಒಡಲೆಲ್ಲಿದೆ ತಾಯಿಲ್ಲದ ಮಡಿಲೆಲ್ಲಿದೆ ಕಣ್ಣಿರಿಗೂ ಒಂದು ಕೊನೆಯ ಆಸೆ ಇದೆ...!!
ಕಣ್ಣಿಲ್ಲದ ಪ್ರೀತಿ ಕೇಳದೆ ಸಾಯುತ್ತಿದೆ....!!
ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ....!!
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ...!!
ನಿನ್ನಾಣೆಗೂ ಗೊತ್ತಿಲ್ಲ ಈ ಒಂಟಿಯ ಹೊಸ ಆಟ, ಕಳೆದು ಹೋಗೋ ಮುನ್ನ ಕೈ ಸೇರಬಾರದೆ...!!
ಮಾತಿಲ್ಲದೆ ಕುಂತಿದ್ದ ಆ ಮೌನದ ಮನವಿಯ ಏನೆಂದು ನೀನೊಮ್ಮೆ ಕೇಳಬಾರದೆ...!!
ಹಳೆದಾದ ಹೊಸ ನೋವು ದಿನ ಕಳೆಯಲು ಗೊತ್ತಿಲ್ಲ, ಎದೆ ಗೂಡ ಗಡಿಯಾರ ನಿನ್ನಿಲ್ಲದೆ ನಡೆಯಲ್ಲ...!!
ಚೂರಗದ ಮನಸ್ಸೇಲ್ಲಿದೆ ಚೂರಾದರು ಮನ ಸೋಲಿದೆ!!
ಆ ಮುತ್ತಿಗೂ ಹಣೆಯ ಮುಟ್ಟಿದ ನೆನಪು ಇದೆ... ಹಣೆ ಮುಟ್ಟಿದ ತಪ್ಪಿಗೆ ಶಿಕ್ಷೆಯ ಬೇಡುತಿದೆ...!!
ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ....!!
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ...!
ಎದೆ ಮೇಲೆ ಮಾಡಿದ್ದ ಆ ಹಣೆಗೂ ಭಾಷೆಗೂ ಬಲವಿದ್ದರೆ ಒಲವನ್ನು ಕಾಯಬಾರದೆ...!!
ಉಸಿರೋಗೋ ಮುಂಚೆನೇ ಹೃದಯಕ್ಕೆ ತಾಯಾಗಿ ಬಡಿತಗಳ ಕೈ ತುತ್ತ ನೀಡಬಾರದೆ...!!
ಹೆಸರನ್ನು ಬರೆದಿಟ್ಟ ಗೋಡೆಗೂ ಉಸಿರಿಲ್ಲ..!! ಮನಸ್ಸಾರೆ ಅಳಿಸೋಕೆ ಇದು ಗೊಂಬೆಯ ಕನಸಲ್ಲ..!!
ದೂರಾದರೆ ನೋವಾಗದೇ.... ದೂರಾಗಲು ಭಯವಾಗಿದೆ.. ನಿನ್ನೊಟ್ಟಿಗೆ ಕಳೆದ ನೆನಪೇ ಕಾಡುತ್ತಿದೆ...!!
ನನ್ನ ಕನಸಿನ ಪೆಟ್ಟಿಗೆಗೆ ಬೀಗವು ಬೀಳುತ್ತಿದೆ...!!
ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ....!!
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ...!!♥♥

DRAMA


Chendutiya Pakkadali song lyric -

chendutiya pakkadali thumba hattira ninthu guri ittu kaadigeya bottidla

ondolle bygulava nee nudiyuva haage athi thunta maathondu naanadla
kidigedi kanasonda kattidla
thada maadade sanna mutthidla
idu yaavdu heldene muchidla

ee ninna haadina poli swaravaguvenu haadi nodennanu smile adru barali
naachikeya nepadalli odadiru nanninda nee mudida sampigeya smell adru sigali
kenneyali kepaagi ulidirla
benninali bevaraagi naanirla
idu yaavdu heldene muchidla

ommomme yochisuve yathakke naanade yedeolage kurchiyanu ketthuva badagi
ibbaniyu suduthihudu thangali naguthihudu inneshtu cheligaala kaayode hudugi
swapnakke bed sheetu hochirla
chandrange mobatthi kottirla
idu yaavdu heldene muchidla

bigiditta thamburi thanthiyanthagiruve thundu maadennanu sound adru barali
ninna thale dimbina chittharavagiruve ninna kanavarikeyali ondandru sigali
signadantha kone salu bittirla
yavadokku konegondu dot idla
idu yaavdu heldene muchidla

SANJU WEDS GEETA 

GAGANAVE BAAGI song lyric -
Gaganave Baagi Bhuviyanu Kelida Haage..
Kadalu Karedanthe Nadiyanu Bhetige..
Yaaru Bandirada Manasali.. Ninna Aagaamana Ee Dina..
Needuva Munna Naane Aamantrana..
Gaganave Baagi Bhuviyanu Kelida Haage..
Kadalu Karedanthe Nadiyanu Bhetige..

Jeevana.. Ee Kshana.. Shuruvaadanthide..
Kanasina Oorina Kada Tereyuttide..
Alabeku Omme Anthaniside.. Kushiyeega Mere Meeri..
Madhumaasadanthe Kaichaachide.. Hasiraaythu Nanna Daari
Needuva Munna Naane Aamantrana..
Gaganave Baagi Bhuviyanu Kelida Haage..
Kadalu Karedanthe Nadiyanu Bhetige..
Yaaru Bandirada Manasali.. Ninna Aagaamana Ee Dina..
Needuva Munna Naane Aamantrana..

Saavina.. Anchina.. Badukanthaade Neenu..
Saavira.. Sooryara.. Belakanthaade Neenu..
Koneyaase Onde Ee Jeevake Ninna Koodi Baalabeku
Prati Janmadallu Nee Heegeye Nanna Preethi Maadabeku..
Needuva Munna Naane Aamantrana..
Gaganave Baagi Bhuviyanu Kelida Haage..
Kadalu Karedanthe Nadiyanu Bhetige..
Yaaru Bandirada Manasali.. Ninna Aagaamana Ee Dina..
Needuva Munna Naane Aamantrana..